I would like to do a video with the song "Kivi Mathondu" (from the movie Milana) subtitled. Thanks in advance.

http://www.youtube.com/watch?v=CHQaTeufmyc

ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನಿನ್ನೆ ಹೀಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು
ಹಸಿರಾಗಿದೆ ಜೀವವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀ ಬಂದು
ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇ ಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೆ ಬೇಕು ನೀನೀಗ…..